ಮಂಗಳೂರು :ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ತಾ.25.08.2025ರಂದು ಮುಹೂರ್ತಗೊಂಡಿರುವ ಡಾಕ್ಟ್ರಾ ಭಟ್ರಾ ಚಲನಚಿತ್ರದ ಶೀರ್ಷಿಕೆಯ ಬಗ್ಗೆ ಮಂಗಳೂರಿನ ವಿವಿಧ ಬ್ರಾಹ್ಮಣ ಸಂಘಟನೆಗಳ ಪದಾಧಿಕಾರಿಗಳು, ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದುದರ ಪ್ರಯುಕ್ತ ನಗರದ ಖಾಸಗಿ ಹೋಟೇಲಿನಲ್ಲಿ ಮಂಗಳವಾರ ಸಭೆ ನಡೆಯಿತು.

ಈ ಸಭೆಗೆ ವಿವಾದಿತ ಶೀರ್ಷಿಕೆಯ ಚಲನಚಿತ್ರದ ನಿರ್ದೇಶಕ ಶ್ರೀ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಇವರನ್ನೂ ಆಮಂತ್ರಿಸಿ ವಿವರಣೆ ಕೇಳಲಾಯಿತು. ಯಾವುದೇ ಕಾರಣಕ್ಕೂ ಚಲನಚಿತ್ರದ ಟೈಟಲ್ ಜಾತಿನಿಂದನೆಯಾಗಬಾರದು ಹಾಗೂ ಸಮಾಜ ಬಾಂಧವರಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಬಾರದು ಎಂದು ಒಕ್ಕೊರಲಿನಿಂದ ತಿಳಿಸಲಾಯಿತು.

ಸ್ವಸ್ಥ ಸಮಾಜಕ್ಕಾಗಿ ಈ ಸಂಶಯಾಸ್ಪದ ಶೀರ್ಷಿಕೆಯನ್ನು ತಕ್ಷಣ ಬದಲಿಸಲು ಆಗ್ರಹಿಸಲಾಯಿತು.ಸೂಕ್ತವಾಗಿ ಸ್ಪಂದಿಸಿದ ಕೊಡಿಯಾಲ್ ಬೈಲ್ ಮತ್ತು ಅವರ ತಂಡ ಇದರ ಬಗ್ಗೆ ತ್ವರಿತ ಗಮನ ಹರಿಸಿ ಆದಷ್ಟು ಬೇಗ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದರು. ಇನ್ನು ಮುಂದೆಯೂ ಯಾವುದೇ ಇಂತಹ ವಿಚಾರಗಳಿದ್ದಲ್ಲಿ ಪರಸ್ಪರ ಇಂತಹ ಸಂವಾದಗಳಿಂದಲೇ ಬಗೆಹರಿಸಬೇಕೆಂದು ತೀರ್ಮಾನಿಸಲಾಯಿತು.

