ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ದ.ಕ. ಮತ್ತು ಉಡುಪಿ ಜಿಲ್ಲೆ ನಮ್ಮ ಒಕ್ಕೂಟದ 18ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇಂದು ಬೆಳಿಗ್ಗೆ ಶ್ರೀ ಮಂಗಳಾದೇವಿ ಕ್ಷೇತ್ರ ಸನ್ನಿಧಿ, ಮಂಗಳೂರು ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅಶೋಕ್ ಕುಮಾರ್ ,ಚಿತ್ರ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಲ್ ಬೈಲ್ , ನಿತಿನ್ ಕುಮಾರ್ ಭಾಗವಹಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು.

ಮಂಗಳಾದೇವಿ ದೇವಸ್ಥಾನದ ಅರ್ಚಕರು ಶ್ರೀ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ, ವಾರ್ಷಿಕೋತ್ಸವ ಸಮಾರಂಭ ಶ್ರೀಮಾತೆಯ ಅನುಗ್ರಹದಿಂದ ನಿರ್ವಿಘ್ನವಾಗಿ ನೆರವೇರಲಿ ಎಂದು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀ ಧನುರಾಜ್,ಕಾರ್ಯದರ್ಶಿ ಶ್ರೀ ರಾಮ್ ಕುಮಾರ್ ಅಮೀನ್ ಜೊತೆ ಕಾರ್ಯದರ್ಶಿ ಶ್ರೀ ಶಿಷಾನ್, ಖಜಾಂಜಿ ಶ್ರೀಮತಿ ಹರಿಣಿ ಉದಯ್, ಮಾಜಿ ಅಧ್ಯಕ್ಷರು ಶ್ರೀ ದೀಪಕ್ ರಾಜ್ ಉಳ್ಳಾಲ್, ಶ್ರೀ ರಮೇಶ್ ಸಾಲ್ಯಾನ್, ಶ್ರೀ ಜಗದೀಶ್ ಶೆಟ್ಟಿ ಸದಸ್ಯರು: ಶ್ರೀ ಉದಯ್, ಶ್ರೀಮತಿ ಶೀಲಾ ಪಡೀಲ್, ಕೋಕಿಲ ವಿಜಯ್ ಮತ್ತು ಕ್ಷೇತ್ರದ ಸಿಬ್ಬಂದಿಗಳು ಹಾಜರಿದ್ದರು. ಅಧ್ಯಕ್ಷರು ಶ್ರೀ ಕೇಶವ ಕನಿಲ ಅವರು ಅತಿಥಿಗಳಿಗೆ ಹೂಗುಚ್ಚವನ್ನು ನೀಡಿ ಕೃತಜ್ಞತೆ ಸಲ್ಲಿಸಿ, ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.

