ಬೆಂಗಳೂರು: ಕರ್ನಾಟಕದಾದ್ಯಂತ ಇಂದಿನಿಂದ ಮಳೆ ಮತ್ತಷ್ಟು ಜೋರಾಗಲಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್, ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೆ ಕರಾವಳಿಯ 4 ಜಿಲ್ಲೆಯ ಶಾಲೆ,ಕಾಲೇಜುಗಳಿಗೆ ರಜೆ ಘೋಷಿಷಲಾಗಿದೆ. ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾವೇರಿ, ಗದಗ, ಧಾರವಾಡದಲ್ಲಿ ಕೂಡ ಮಳೆಯಾಗಲಿದೆ. ಕದ್ರಾ, ಸಿದ್ದಾಪುರ, ಗೇರುಸೊಪ್ಪ, ಕಾರ್ಕಳ, ಶಿರಾಲಿ, ಭಾಲ್ಕಿ, ಬಂಟ್ವಾಳ, ಉಪ್ಪಿನಂಗಡಿ, ಮಂಗಳೂರು, ಕಾರವಾರ, ಜೋಯ್ಡಾ, ಬೀದರ್, ಅಂಕೋಲಾದಲ್ಲಿ ಭಾರಿ ಮಳೆಯಾಗಿದೆ.
ಮೂಡುಬಿದಿರೆ, ಮಾಣಿ,ಗೋಕರ್ಣ, ಶಕ್ತಿನಗರ, ಕೋಟಾ, ಹುಮ್ನಾಬಾದ್, ಧರ್ಮಸ್ಥಳ, ಯಲ್ಲಾಪುರ, ಉಡುಪಿ, ಸುಳ್ಯ, ಸೈದಾಪುರ, ಪುತ್ತೂರು, ಮಂಠಾಳ, ಮಂಕಿ, ಕುಮಟಾ, ಕಮ್ಮರಡಿ, ಔರಾದ್, ಶೃಂಗೇರಿ, ಮಂಗಳೂರು, ತ್ಯಾಗರ್ತಿ, ಸೋಮವಾರಪೇಟೆ, ಸೇಡಂ, ಲೋಂಡಾ, ಕೊಪ್ಪ, ಖಾನಾಪುರ, ಕಮಲಾಪುರ, ಕಳಸ, ಕಲಬುರಗಿ, ಹುಂಚದಕಟ್ಟೆ, ಹಿರೆಕೆರೂರು, ಚಿತ್ತಾಪುರ, ನಾಪೋಕ್ಲು, ಎನ್ಆರ್ ಪುರ, ಮುಲ್ಕಿ, ಮಸ್ಕಿ, ಲಕ್ಷ್ಮೇಶ್ವರ, ಕುಶಾಲನಗರ, ಜಯಪುರ, ಜೇವರ್ಗಿ, ಹಾವೇರಿ, ಗಂಗಾವತಿ, ಗಂಗಾಪುರ, ದಾವಣಗೆರೆ, ಬಾಳೆಹೊನ್ನೂರಿನಲ್ಲಿ ಮಳೆಯಾಗಿದೆ.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದೆ. ಮಂಗಳೂರು ಏರ್ಪೋರ್ಟ್ ನಲ್ಲಿ 27.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಿದೆ.

