ಉಳ್ಳಾಲ : ಬ್ರೇಕ್ ವೈಫಲ್ಯಕ್ಕೊಳಗಾಗಿ ನಿಯಂತ್ರಣ ತಪ್ಪಿದ ಕೆಎಸ್ಆರ್ಟಿಸಿ ಬಸ್ ನೇರ ಬಸ್ ನಿಲ್ದಾಣ ಒಳಗೆ ನುಗ್ಗಿದ ಪರಿಣಾಮ ಮಗು ಸಹಿತ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಆಘಾತಕಾರಿ ಘಟನೆ ಗಡಿ ಭಾಗವಾದ ತಲಪಾಡಿ ಎಂಬಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.


ಪ್ರಾಥಮಿಕ ಮಾಹಿತಿಗಳ ಪ್ರಕಾರ ಸಾವನ್ನಪ್ಪಿದವರ ಪೈಕಿ ಅಜ್ಜಿನಡ್ಕ ನಿವಾಸಿಗಳಾದ ಹೈದರ್ ಆಲಿ(47) ಖತೀಜಾ,(60) ಹಸ್ನ ನತೀಜಾ(52) ಅಯೇಶಾ(19) ಹಾಗೂ ಫರಂಗಿಪೇಟೆಯ ಅವ್ವಮ್ಮ ಎಂದು ತಿಳಿದುಬಂದಿದ್ದು, ಮ್ರತರಾದ 5 ಮಂದಿ ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ.


ಅಪಘಾತ ಸಂದರ್ಭ ಇವರು ಬಸ್ ನಿಲ್ದಾಣದ ಬಳಿ ರಿಕ್ಷಾವೊಂದರಲ್ಲಿ ಕುಳಿದ್ದರು ಎನ್ನಲಾಗಿದೆ.
ಅಲ್ಲದೆ ಘಟನೆಯ ಸಂದರ್ಭ ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

