ಮಂಗಳೂರು: ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ಸ್ವರಾಜ್ ಶೆಟ್ಟಿ ನಿರ್ದೇಶನದಲ್ಲಿ ಲಂಚುಲಾಲ್ ಕೆ ಎಸ್ ನಿರ್ಮಾಣದಲ್ಲಿ ತಯಾರಾದ “ನೆತ್ತೆರೆಕೆರೆ” ತುಳು ಸಿನಿಮಾದ ಬಿಡುಗಡೆ ಸಮಾರಂಭ ಇಂದು ಭಾರತ್ ಮಾಲ್ ನ ಬಿಗ್ ಸಿನೆಮಾಸ್ ನಲ್ಲಿ ಜರಗಿತು.
ಸೇರಿದ ಗಣ್ಯರು ದೀಪ ಬೆಳಗಿಸುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಯಿತು.ನಂತರ ಹಿರಿಯ ರಂಗಭೂಮಿ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ ಸ್ವರಾಜ್ ಶೆಟ್ಟಿಯವರ ಹಲವು ವರ್ಷದ ಕನಸು ಇಂದು ನನಸಾಗುವ ದಿನ ಬಂದಿದೆ ನಾವೆಲ್ಲರೂ ತುಂಬಾ ಕಾತುರದಲ್ಲಿದ್ದೇವೆ.ಚಿತ್ರದ ನಿರ್ಮಾಪಕರು ಹಾಗೂ ಇಡೀ ಚಿತ್ರತಂಡಕ್ಕೆ ಶುಭಕೋರುತ್ತಾ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.



ನಂತರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ ಇದು ತುಳುಭಾಷೆಯ150ನೇ ಚಿತ್ರವಾಗಿದೆ ಇದುವರೆಗೆ ತುಳು ಭಾಷೆಯಲ್ಲಿ ಕಾಮಿಡಿ ಚಿತ್ರಗಳೇ ಬರುತ್ತಿದ್ದು ಸ್ವರಾಜ್ ಶೆಟ್ಟಿಯವರು ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಈ ಚಿತ್ರವು ಯಶಸ್ವಿಯಾಗಲಿ ಎಂದರು.


ಸಾಮಾಜಿಕ ಹೋರಾಟಗಾರ ಹಾಗೂ ಬಿಗ್ಬಾಸ್ ಸ್ವರ್ಧಿ ಕಿರಿಕ್ ಕೀರ್ತಿ ಮಾತನಾಡಿ ನಾನು ಈ ಚಿತ್ರ ನೋಡಲು ಬೆಂಗಳೂರಿನಿಂದ ಬಂದಿದ್ದೇನೆ.ಬಹಳ ಕಾತುರದಲ್ಲಿದ್ದೇನೆ ತುಳುಭಾಷೆಯ150ನೇ ಚಿತ್ರ ನೆತ್ತೆರೆಕೆರೆ ನೂರೈತ್ತು ದಿನಗಳ ವರೆಗೆ ಯಶಸ್ವಿಯಾಗಿ ಪ್ರದರ್ಶನ ಕಾಣಲಿ ಎಂದರು.

ವೇದಿಕೆಯಲ್ಲಿ ತ್ರಿಶೂಲ್ ಶೆಟ್ಟಿ, ಇಸ್ಮಾಯಿಲ್ ಮೂಡುಶೆಡ್ಡೆ, ನಿರ್ಮಾಪಕ ಲಂಚುಲಾಲ್, ನಟಿ ದಿಶಾಲಿ ಪೂಜಾರಿ, ನಮೀತಾ,ಜಗನ್ನಾಥ ಶೆಟ್ಟಿ ಬಾಳ,ಉದಯ ಬಳ್ಳಾಲ್, ವಿನೋದ್ ರಾಜ್ ಕೋಕಿಲ,ಸಚಿನ್ ಎ.ಎಸ್, ಸಂತೋಷ್ ಶೆಟ್ಟಿ, ಆರ್.ಧನರಾಜ್,ಎ.ಕೆ ವಿಜಯ್,ಲಕ್ಷ್ಮಣ್ ಕುಂದರ್, ಅಬು ಸಲೀಂ, ನವೀನ್ ಶೆಟ್ಟಿ ಎಡ್ಮೆಮಾರ್ ಉಪಸ್ಥಿತರಿದ್ದರು.

ಸ್ವರಾಜ್ ಶೆಟ್ಟಿ ಸಿನಿಮಾಕ್ಕೆ ಚಿತ್ರಕತೆ ,ಸಂಭಾಷಣೆಯೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರಲ್ಲದೆ ನಾಯಕ ನಟನಾಗಿಯೂ ಅಭಿನಯಿಸಿದ್ದಾರೆ. ನಾಯಕಿಯಾಗಿ ದಿಶಾಲಿ ಪೂಜಾರಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಬಹುಭಾಷಾ ತಾರಾ ನಟ ಸುಮನ್ ತಲ್ವಾರ್, ಲಂಚುಲಾಲ್ ಕೆ ಎಸ್ ಅಭಿನಯಿಸಿದ್ದಾರೆ

ಸಿನಿಮಾದಲ್ಲಿ ಯುವ ಶೆಟ್ಟಿ ಪುಷ್ಪರಾಜ್ ಬೊಳ್ಳೂರು, ಅನಿಲ್ ಉಪ್ಪಳ, ಭವ್ಯಾ ಪೂಜಾರಿ, ಪೃಥ್ವಿನ್ ಪೊಳಲಿ, ಉತ್ಸವ್ ವಾಮಂಜೂರು, ನೀತ್ ಪೂಜಾರಿ, ವಿಜಯ ಮಯ್ಯ ಚಂದ್ರಶೇಖರ ಸಿದ್ದಕಟ್ಟೆ, ಮನೀಶ್ ಶೆಟ್ಟಿ, ನಮಿತ ಕಿರಣ್, ಸುನೀತಾ, ವಿನಾಯಕ್ ಜಪ್ಪು, ಭಗವಾನ್, ಕೀರ್ತನ್ ಮುಲ್ಕಿ ನಟಿಸಿದ್ದಾರೆ.
ಸಿನಿಮಾಕ್ಕೆ ಚಿತ್ರಕತೆ ನಿರ್ದೇಶನ ಸ್ವರಾಜ್ ಶೆಟ್ಟಿ, ಕ್ಯಾಮರಾ: ಉದಯ ಬಲ್ಲಾಳ್, ಸಂಗೀತ: ವಿನೋದ್ ರಾಜ್ ಕೋಕಿಲಾ, ಸಂಕಲನ: ಗಣೇಶ್ ನೀರ್ಚಾಲ್, ಸಾಹಸ: ಮಾಸ್ ಮಾದ, ಟೈಗರ್ ಶಿವ, ಎಕ್ಸಿಟಿವ್ ಪ್ರೊಡ್ಯುಸರ್ : ಯತೀಶ್ ಪೂಜಾರಿ, ಲೈನ್ ಪ್ರೊಡ್ಯುಸರ್: ವಿಜಯ ಮಯ್ಯ, ಪ್ರೊಡಕ್ಷನ್ ಮ್ಯಾನೇಜರ್: ರಾಜೇಶ್ ಕುಡ್ಲ, ನಿರ್ದೇಶನ ವಿಭಾಗದಲ್ಲಿ ಅವಿನಾಶ್ ಎಸ್ ಆಪ್ತ, ನೀತ್ ಪೂಜಾರಿ, ಕಾರ್ತಿಕ್ ಜಯಚಂದ್ರನ್, ತುಳಸಿದಾಸ್ ಮಂಜೇಶ್ವರ್, ಮೇಕಪ್ : ಚೇತನ್, ಆಟ್೯: ವಿಪಿನ್,
ನೆತ್ತೆರೆಕೆರೆ ಸಿನಿಮಾ ಮಂಗಳೂರಿನಲ್ಲಿ ಪಿವಿಆರ್, ಸಿನಿಪೊಲಿಸ್, ಭಾರತ್ ಸಿನಿಮಾಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಬೆಳ್ತಂಗಡಿಯಲ್ಲಿ ಭಾರತ್, ದೇರಳಕಟ್ಟೆಯಲ್ಲಿ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ನೆತ್ತೆರೆಕೆರೆ ಸಿನಿಮಾ ತೆರೆಕಂಡಿದೆ.

