ಕೇರಳ : ಆಗಸ್ಟ್ 28 ರಂದು ಓಣಂ ಹಬ್ಬದಂದು ತೆರೆಕಂಡ ಮಲಯಾಳಂ ಚಲನಚಿತ್ರ ಲೋಕಾ-ಅಧ್ಯಾಯ 1 ಬಿಡುಗಡೆಗೂ ಮುನ್ನ ಸಾಕಷ್ಟು ಸುದ್ದಿ ಮಾಡಿತ್ತು ಮತ್ತು ಮೋಹನ್ ಲಾಲ್ ಅವರ ‘ಹೃದಯಪೂರ್ವಂ’ ನಂತಹ ದೊಡ್ಡ ಚಿತ್ರಕ್ಕೆ ಪೈಪೋಟಿ ಒಡ್ಡುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ ಲೋಕಾ ಅತಿದೊಡ್ಡ ಅನಿರೀಕ್ಷಿತ ಹಿಟ್ ಆಗಿ ಹೊರಹೊಮ್ಮಿದೆ, ಈ ಚಿತ್ರವು ಫ್ಯಾಂಟಸಿ ಹಾಗೂ ಸಸ್ಪೆನ್ಸ್ ಅಂಶಗಳನ್ನು ಒಳಗೊಂಡಿದೆ.
ಈ ಸಿನಿಮಾವು ಲೋಕ ಎಂಬ ಸೂಪರ್ ಹೀರೋ ಸಿನಿಮೀಯ ಬ್ರಹ್ಮಾಂಡದ ಆರಂಭವನ್ನು ಸೂಚಿಸುತ್ತದೆ. ಕೇರಳದ ಸಂಸ್ಕೃತಿ ಮತ್ತು ಪುರಾಣಗಳಲ್ಲಿ ಬೇರೂರಿರುವ ಈ ನಿರೂಪಣೆಯು ವೀಕ್ಷಕರಿಗೆ ಮಾಂತ್ರಿಕ ಮತ್ತು ಕಾಲ್ಪನಿಕ ಜಗತ್ತನ್ನು ತೆರೆಯುತ್ತದೆ.

ಈ ಸಿನಿಮಾದಲ್ಲಿ ಹೃದಯಂ ಖ್ಯಾತಿಯ ಕಲ್ಯಾಣಿ ಪ್ರಿಯದರ್ಶನ್ ಹಾಗೂ ಪ್ರೇಮಲು ಮೂಲಕ ಜನಪ್ರಿಯತೆ ಪಡೆದ ನಸ್ಲೆನ್ ನಟಿಸಿದ್ದಾರೆ. ಡೊಮಿನಿಕ್ ಅರುಣ್ ನಿರ್ದೇಶನದ, ದುಲ್ಕರ್ ಸಲ್ಮಾನ್ ನಿರ್ಮಾಣದ ಈ ಚಿತ್ರವು ಮಲಯಾಳಂ ಚಿತ್ರರಂಗದಲ್ಲಿ ಈ ವರ್ಷ ತೆರೆಕಂಡ 6 ನೇ ಅತ್ಯಧಿಕ ಆರಂಭಿಕ ದಾಖಲೆಯನ್ನು ಗಳಿಸಿದೆ. ತನ್ನ ಮೊದಲ ದಿನದಂದು ಬಾಕ್ಸ್ ಆಫೀಸ್ನಲ್ಲಿ 2.70 ಕೋಟಿ ಗಳಿಸಿದೆ. ಶನಿವಾರ ಮತ್ತು ಭಾನುವಾರ ವಿಶೇಷವಾಗಿ ಎಲ್ಲೆಡೆ ಹೌಸ್ಫುಲ್ ಶೋಗಳು ನಡೆದಿದ್ದು, ಸಿನಿಮಾ ಈಗಾಗಲೇ 6.45 ಕೋಟಿ ರೂಪಾಯಿ ಗಳಿಸಿದೆ.

ಇದೀಗ ಕೋಥಾ ಲೋಕ ಎಂಬ ಶೀರ್ಷಿಕೆಯಡಿಯಲ್ಲಿ ತೆಲುಗು ಆವೃತ್ತಿಯಲ್ಲಿ ಬಿಡುಗಡೆಯಾಗಿದ್ದು BookMyShow ನಲ್ಲಿ ಟ್ರೆಂಡಿಂಗ್ನಲ್ಲಿದೆ ಮತ್ತು ವ್ಯಾಪಕ ಪ್ರಶಂಸೆಯನ್ನು ಗಳಿಸುತ್ತಿದೆ.ತೆಲುಗು ಆವೃತ್ತಿಯನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರಸಿದ್ಧ ಬ್ಯಾನರ್ ಸಿತಾರಾ ಎಂಟರ್ಟೈನ್ಮೆಂಟ್ಸ್ ಬಿಡುಗಡೆ ಮಾಡಿದೆ. ಚಿತ್ರಕ್ಕೆ ಭರ್ಜರಿ ಸ್ವಾಗತ ಸಿಗುತ್ತಿದೆ,

ಕೇರಳದಲ್ಲಿಯೂ ಎರಡನೇ ದಿನ 150 ಕ್ಕೂ ಹೆಚ್ಚು ಹೆಚ್ಚುವರಿ ತಡರಾತ್ರಿ ಪ್ರದರ್ಶನಗಳನ್ನು ಸೇರಿಸಲಾಗಿದೆ. ಆರಂಭದಲ್ಲಿ 250 ಪರದೆಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಈಗ ರಾಜ್ಯಾದ್ಯಂತ 300 ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

ತೆಲುಗು ರಾಜ್ಯಗಳಲ್ಲಿ ಸಿತಾರಾ ಎಂಟರ್ಟೈನ್ಮೆಂಟ್ಸ್ ಹೊರತುಪಡಿಸಿ, ಈ ಚಿತ್ರವನ್ನು ತಮಿಳುನಾಡಿನಲ್ಲಿ ಎಜಿಎಸ್ ಸಿನಿಮಾಸ್, ಕರ್ನಾಟಕದಲ್ಲಿ ರಾಜ್ ಬಿ. ಶೆಟ್ಟಿ, ಲೋಕಃ ಚಿತ್ರವನ್ನು ಲೈಟರ್ ಬುದ್ಧ ಫಿಲ್ಮ್ಸ್ ಬ್ಯಾನರ್ ಮೂಲಕ ರಾಜ್ಯಾದ್ಯಂತ ಹಂಚಿಕೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ.ಮತ್ತು ಉತ್ತರ ಭಾರತದಲ್ಲಿ ಪೆನ್ ಮರುಧರ್ ವಿತರಿಸುತ್ತಿವೆ.



