ಮಂಗಳೂರು : ಸುವರ್ಣ ಕದಳಿ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಚೇರಿಯ ಶಾಖೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಬಿಜೈ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸುವ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶ್ರೀ ಎಂ ಶಶಿಧರ ಹೆಗ್ಡೆ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶ್ರೀ ಸತೀಶ್ ಜೋಗಿ ಮಾಲೆಮಾರ್ ರವರು ವಹಿಸಿದ್ದು ಮುಖ್ಯ ಅತಿಥಿಗಳಾಗಿ ಸಂಘದ ಸ್ಥಾಪಕ ಅಧ್ಯಕ್ಷ ಶ್ರೀ ನರಸಿಂಹ ಜೋಗಿ, ಮನಪಾ ಮಾಜಿ ಮೇಯರ್ ಶ್ರೀ ದಿವಾಕರ್, ಸಂಘದ ಮಾಜಿ ಅಧ್ಯಕ್ಷ ಶ್ರೀ ಸದಾನಂದ ಜೋಗಿ, ಕರ್ಣಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಶ್ರೀ ಕಿರಣ್ ಜೋಗಿ ಕೋಡಿಕಲ್, ಹೋಟೆಲ್ ಡಿಂಕಿ ಡೇನ್ ಇದರ ಮಾಲೀಕರಾದ ಶ್ರೀ ಸ್ವರ್ಣಸುಂದರ್, ಸಂಘದ ಸಲಹೆಗಾರರಾಗಿರುವ ಸನ್ನದು ಲೆಕ್ಕಪರಿಶೋಧಕರಾದ ಶ್ರೀ ಸುಧೇಶ್ ರೈ, ಸಂಘದ ಮಾಜಿ ನಿರ್ದೇಶಕ ಶ್ರೀ ಚಂದ್ರರಾಜ ಕೆ., ಸಂಘದ ಸ್ಥಾಪಕ ಸದಸ್ಯ ಶ್ರೀ ಡಿ.ಡಿ.ಪುರುಷ, ಸಂಘದ ಹಿರಿಯ ಸಲಹೆಗಾರರೂ ಮತ್ತು ಉಪಾಧ್ಯಕ್ಷರಾದ ಶ್ರೀ ಜಗಜ್ಜೀವನ್ ದಾಸ್ ರವರು ಉಪಸ್ಥಿತರಿದ್ದರು.


ಸಂಘದ ಮೇಲೆ ಪ್ರೀತಿ ಇರಿಸಿ ಆಗಮಿಸಿದ ಹಿರಿಯ ಸಹಕಾರಿ ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಚಿತ್ತರಂಜನ್ ರವರು ಸಮಯೋಚಿತ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸಹಕಾರಿ ಮತ್ತು ಠೇವಣಿದಾರರಾದ ಶ್ರೀಮತಿ ಕಮಲಮ್ಮ ಟಿ. ಆರ್ ರವರನ್ನು ವಿಶೇಷ ಪುರಸ್ಕರಿಸುವ ಕಾರ್ಯಕ್ರಮವನ್ನು ಅವರ ಅನುಪಸ್ಥಿತಿಯಲ್ಲಿ ಅವರ ಮನೆಗೆ ಹೋಗಿ ನೆರವೇರಿಸಲು ತೀರ್ಮಾನಿಸಿ ಸಂಸ್ಥೆಗೆ ಹೆಚ್ಚು ವ್ಯವಹಾರ ನಡೆಯಲು ಶ್ರಮಿಸುತ್ತಿರುವ ನಿರ್ದೇಶಕ ಶ್ರೀ ಗೋಪಿನಾಥ್ ಜೋಗಿ ಹಾಗೂ ಸಹಕರಿಸಿದ ನಿರ್ದೇಶಕ ಶ್ರೀ ದಿನೇಶ್ ಜೋಗಿ ಯವರನ್ನು ಗೌರವಿಸಲಾಯಿತು.


ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಿಶಾಲಾಕ್ಷಿ ಸಂಘದ ಕಿರು ಪರಿಚಯ ಮಂಡಿಸಿ ಅಧ್ಯಕ್ಷ ಶ್ರೀ ಸತೀಶ್ ಜೋಗಿ ಮಾಲೆಮಾರ್ ಸ್ವಾಗತಿಸಿದರು.ನಿರ್ದೇಶಕಿ ಶ್ರೀಮತಿ ನಿಶಾ ಕಾರ್ಯಕ್ರಮ ನಿರ್ವಹಿಸಿ,ನಿರ್ದೇಶಕ ಎಸ್ ಸುಧಾಕರ ಜೋಗಿ ವಂದಿಸಿದರು.ಬೆಳಿಗ್ಗೆ ಪೂಜಾವಿಧಿ ನೆರವೇರಿಸಿದ ಕದ್ರಿ ಜೋಗಿ ಮಠದ ಅರ್ಚಕ ಶ್ರೀ ಉಮೇಶ್ ಜೋಗಿ ಮತ್ತು ಅವರ ಸಹಾಯಕ ಶ್ರೀ ವಾಸುದೇವ ಜೋಗಿ ಯವರನ್ನು ಕ್ರತಜ್ಞತೆಯಿಂದ ಸ್ಮರಿಸಲಾಯಿತು.


