ಮಂಗಳೂರು :“ಉತ್ತಮ ಜೀವನ ನಿರ್ವಹಣೆಗಾಗಿ ಹಿಮಾಲಯದ ಧ್ಯಾನಯೋಗ ವಿಷಯದ ಕುರಿತು “ಪರಮ ವಂದನೀಯ ಗುರುಮಾ ಅವರಿಂದ ವಿಶೇಷ ಪ್ರವಚನ ಕಾರ್ಯಕ್ರಮ ಸೆ.9ರಂದು ಮಂಗಳವಾರ ಸಂಜೆ 5 ಗಂಟೆಯಿಂದ ಮಂಗಳೂರಿನ ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನದಲ್ಲಿ ನಡೆಯಲಿದೆ ಎಂದು ಚಂದ್ರಶೇಖರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈಗಿನ ಕಾಲದಲ್ಲಿ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಅನೇಕ ಜನರು ಸ್ಫೂರ್ತಿದಾಯಕ ಭಾಷಣಕಾರರಿಂದ ಹಿಡಿದು ಆಧ್ಯಾತ್ಮಿಕ ಗುರುಗಳವರೆಗೆ ಹಲವರ ಸಹಾಯ ಪಡೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲಿ, ‘ಹಿಮಾಲಯ ಧ್ಯಾನಯೋಗ’ದ ಮೂಲಕ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಧ್ಯಾನಕ್ಕೆ ಸೇರುವ ಮೂಲಕ ತಮ್ಮ ಸರ್ವತೋಮುಖ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ‘ಹಿಮಾಲಯ ಧ್ಯಾನಯೋಗ’ದ ಸಂಸ್ಕೃಾಪಕ ಸದ್ಗುರು ಶ್ರೀ ಶಿವಕೃಪಾನಂದ ಸ್ವಾಮೀಜಿಯವರು ಆತ್ಮಸಾಕ್ಷಾತ್ಕಾರವನ್ನು ಪಡೆಯಲು ಹಲವು ವರ್ಷಗಳಿಂದ ಹಿಮಾಲಯದಲ್ಲಿ ಧ್ಯಾನಸಾಧನೆ ಮಾಡಿದ್ದಾರೆ ಮತ್ತು ಕಳೆದ 25 ವರ್ಷಗಳಿಂದ ಅವರು ಸಮಾಜದಲ್ಲಿ ಹಿಮಾಲಯದ ಗಹನವಾದ ಜ್ಞಾನವನ್ನು ನಿರಂತರವಾಗಿ ಹಂಚಿಕೊಳ್ಳುತ್ತಿದ್ದಾರೆ. ಹಿಮಾಲಯದಿಂದ ಜ್ಞಾನವನ್ನು ಪಡೆದ ನಂತರ, ಮೊತ್ತಮೊದಲು ಅವರು ತಮ್ಮ ಧರ್ಮಪತಿ ಪೂಜ್ಯ ಗುರುಮಾ ಅವರಿಗೆ ಆ ಜ್ಞಾನದ ಆತ್ಮಸಾಕ್ಷಾತ್ಕಾರ ಮಾಡಿಸಿದ್ದಾರೆ.

ಪೂಜ್ಯ ಸ್ವಾಮೀಜಿಯವರು ತಮ್ಮ ಆಧ್ಯಾತ್ಮಿಕ ಯಾತ್ರೆಯಲ್ಲಿ ಅವರ ಗುರುಗಳಾದ ಶ್ರೀ ಶಿವಬಾಬಾ ಮತ್ತು ತಮ್ಮ ಮೊದಲ ಶಿಷ್ಯ ಹಾಗೂ ಧರ್ಮಪತ್ನಿ ಪರಮ ವಂದನೀಯ ಗುರುಮಾರವರ ಮಹತ್ವಪೂರ್ಣ ಕೊಡುಗೆಯನ್ನು ಉಲ್ಲೇಖಿಸಿದ್ದಾರೆ.
ಪೂಜ್ಯ ಗುರುಮಾ ಅವರಿಂದ ಉತ್ತಮ ಜೀವನ ನಿರ್ವಹನೆಗಾಗಿ ಹಿಮಾಲಯದ ಧ್ಯಾನಯೋಗ” ಎಂಬ ವಿಷಯದ ಬಗ್ಗೆ “ಸಂಘನಿಕೇತನ’ದ ಸಭಾಂಗಣ ಕುರಿತು ಪ್ರವಚನವನ್ನು ನೀಡಲಿದ್ದಾರೆ ಎಂದರು.

ಇಂದಿನ ತಂತ್ರಜ್ಞಾನದ ಈ ಯುಗದಲ್ಲಿ, ನಮ್ಮ ಜೀವನದಲ್ಲಿ ಉದ್ಭವಿಸುವ ಅನೇಕ ಪ್ರಶ್ನೆಗಳಿಗೆ ಪರಿಹಾರಗಳನ್ನು ಈ ಕಾರ್ಯಕ್ರಮದಲ್ಲಿ ಕಾಣಬಹುದು. ಎಲ್ಲಾ ವಯಸ್ಸಿನ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನಮ್ಮ ದೈನಂದಿನ ದಿನಚರಿಯಲ್ಲಿ ‘ಹಿಮಾಲಯ ಧ್ಯಾನ ಯೋಗ’ ನಮಗೆ ಯಾವ ರೀತಿಯಲ್ಲಿ ಉಪಯುಕ್ತವಾಗಿದೆ, ಈ ಎಲ್ಲಾ ವಿಷಯಗಳನ್ನು ಪೂಜ್ಯ ಗುರುಮಾ ತಮ್ಮ ಮಧುರವಾಣಿಯಲ್ಲಿ ತಿಳಿಸಿ ಹೇಳುತ್ತಾರೆ.ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲ ಈ ಕಾರ್ಯಕ್ರಮದ ಲಾಭವನ್ನು ಎಲ್ಲರೂ ಪಡೆದುಕೊಳ್ಳಿ. ಉಚಿತ ಪ್ರವೇಶವಿದ್ದು ನೋಂದಣಿಗಾಗಿ ನೀವು ಮೊಬೈಲ್ ಸಂಖ್ಯೆ 9480821999 ಯನ್ನು ಸಂಪರ್ಕಿಸಿ ಎಂದು ಚಂದ್ರಶೇಖರ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮುಕುಂದ್, ಕಾರ್ತಿಕ್, ಮಮತಾಚಂದ್ರ, ಖುಷ್ಬು, ಬೀನಾ ಶುಕ್ಲಾ ಉಪಸ್ಥಿತರಿದ್ದರು.

