ಮಂಗಳೂರು : ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆ.5 ರಂದು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 2025-26 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ದ.ಕ ಜಿಲ್ಲೆಯಿಂದ 20 ಶಿಕ್ಷಕ/ಶಿಕ್ಷಕಿಯರ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದ.ಕ.ಜಿಲ್ಲೆಯಲ್ಲಿ 7 ಕಿರಿಯ ಪ್ರಾಥಮಿಕ , 7 ಹಿರಿಯ ಪ್ರಾಥಮಿಕ ಮತ್ತು 6 ಪ್ರೌಢಶಾಲೆ ಸೇರಿದಂತೆ 20 ಮಂದಿ ಶಿಕ್ಷಕರು 2025ನೇ ಸಾಲಿನ ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗ:
1) ಶಾಲಿನಿ ಹೆಚ್.ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಂಡೇಶ್ವರ, ಮಂಗಳೂರು ಉತ್ತರ ವಲಯ
2) ವೀಣಾ ಮೇರಿ ರೇಗೋ – ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ತಿಪ್ಲಬೆಟ್ಟು, ಮಂಗಳೂರು ದಕ್ಷಿಣ
3)ಉಷಾಲತಾ ಹೆಗ್ಡೆ – ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಡ್ಯೋಡಿ ಮಾರ್ಪಾಡಿ, ಮೂಡಬಿದ್ರೆ
4)ಶಾಂತಿ ಲೀನಾ- ಕಿರಿಯ ಪ್ರಾಥಮಿಕ ಶಾಲೆ ದೇವಸ್ಯ ಪಡೂರು, ಬಂಟ್ವಾಳ
5) ಜಯ.ಕೆ – ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸುರ್ಯ, ಬೆಳ್ತಂಗಡಿ
6)ಜಗನ್ನಾಥ.ಕೆ- ದ.ಕ.ಜಿಪಂ ಕಿರಿಯ ಪ್ರಾಥಮಿಕ ಶಾಲೆ ಅರೆಲ್ತಡಿ, ಪುತ್ತೂರು
7) ಲಲಿತ ಕುಮಾರಿ ಎಸ್, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಂಡೋಡಿ ಸುಳ್ಯ

ಹಿರಿಯ ಪ್ರಾಥಮಿಕ ವಿಭಾಗ
1)ಜಯಲಕ್ಷ್ಮಿ ದೈ.ಶಿ – ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಕಂಪಾಡಿ ಮೀನಕಳಿಯ, ಮಂಗಳೂರು ಉತ್ತರ ವಲಯ
2) ಚಂದ್ರಶೇಖರ.ಸಿ.ಎಚ್.ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲಗುಡ್ಡ ಸೋಮೇಶ್ವರ, ಮಂಗಳೂರು ದಕ್ಷಿಣ
3) ಹರೀಶ ಕೆಎಂ ಮುಖ್ಯ ಶಿಕ್ಷಕರು -ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಾರು, ಮೂಡಬಿದ್ರೆ
4) ಬಾಬು ನಾಯ್ಕ ಬಿ- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೀರ್ಕಜೆ ಕೇಪು, ಬಂಟ್ವಾಳ
5) ಆರತಿ ಕುಮಾರಿ ದೈಹಿಕ ಶಿಕ್ಷಣ ಶಿಕ್ಷಕಿ- ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ನಿಟ್ಟಡೆ, ಬೆಳ್ತಂಗಡಿ
6) ತಾರಾನಾಥ, ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಶಾಂತಿಗೋಡು, ಪುತ್ತೂರು
7) ಶ್ರೀಧರ ಗೌಡ ಸ.ಹಿ.ಪ್ರಾ.ಶಾಲೆ ದೇವಚಳ್ಳ, ಸುಳ್ಯ.

ಪ್ರೌಢಶಾಲಾ ವಿಭಾಗ:
1) ವಿಲ್ಮಾ ಪಿ. ಲೋಬೋ- ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲೆ, ಮಂಗಳೂರು ಉತ್ತರ ವಲಯ
2) ದುರ್ಗಾಲತಾ ಸಹ ಶಿಕ್ಷಕಿ- ಸರ್ಕಾರಿ ಪ್ರೌಢಶಾಲೆ ಪೆರ್ಮನ್ನೂರು, ಮಂಗಳೂರು ದಕ್ಷಿಣ
3)ರತ್ನಾವತಿ ಆಚಾರ್. ಕೆ ಸಹಶಿಕ್ಷಕಿ- ಸರ್ಕಾರಿ ಪ್ರೌಢಶಾಲೆ ಪ್ರಾಂತ್ಯ, ಮೂಡಬಿದ್ರೆ
4) ಆದಂ, ಸಹ ಶಿಕ್ಷಕರು- ಸರ್ಕಾರಿ ಪ್ರೌಢಶಾಲೆ ಸರಪಾಡಿ, ಬಂಟ್ವಾಳ
5) ವಿಜಯಕುಮಾರ್.ಎಂ.- ಸರ್ಕಾರಿ ಪ್ರೌಢಶಾಲೆ ಪೆರ್ಲಬೈಪಾಡಿ, ಬೆಳ್ತಂಗಡಿ
6) ಮೋಹನ ಎ ಚಿತ್ರಕಲಾ ಶಿಕ್ಷಕರು – ಸರ್ಕಾರಿ ಪ್ರೌಢಶಾಲೆ ಎಣ್ಮೂರು, ಸುಳ್ಯ
ಪ್ರಶಸ್ತಿ ಪ್ರದಾನ: ಸೆ.5ರಂದು ಬೆಳಗ್ಗೆ 10 ಗಂಟೆಗೆ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ಸಂತಕಟ್ಟೆ ಇಲ್ಲಿ ನಡೆಯಲಿರುವ ದ.ಕ. ಜಿಲ್ಲಾ ಮತ್ತು ಬೆಳ್ತಂಗಡಿ ತಾಲೂಕು ಮಟ್ಟದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ -ಶಿಕ್ಷಕ ದಿನಾಚರಣೆ ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

