ಮಂಗಳೂರು: ಪ್ರವಾದಿ ಮುಹಮ್ಮದರು ಜನಿಸಿ 1500 ವರ್ಷಗಳೇ ಕಳೆದಿವೆ ಮತ್ತು ಇಸ್ಲಾಮ್ ಭಾರತಕ್ಕೆ ಆಗಮಿಸಿ ಸಾವಿರ ವರ್ಷಗಳೇ ಕಳೆದಿವೆ ಆದರೆ ಮುಸ್ಲಿಮರ ಧರ್ಮ ಗ್ರಂಥ ಕುರಾನ್ ಅದರ ಆರಾಧನಾ ಕೇಂದ್ರವಾಗಿರುವ ಮಸೀದಿಗಳು,ನಮಾಝ್,ಅದಾನ್ ಇತ್ಯಾದಿಗಳು ಈ ದೇಶಕ್ಕೆ ತೆರೆದುಕೊಂಡಿರುವುದು ಬಹಳ ಕಡಿಮೆ. ಇದರಿಂದಾಗಿ ಸಮಾಜದಲ್ಲಿ ಮಸೀದಿಗಳ ಬಗ್ಗೆ,ಮುಸ್ಲಿಮರ ಬಗ್ಗೆ ಅವರ ಕುರಾನಿನ ಬಗ್ಗೆ ಮತ್ತು ಆಚಾರ ವಿಚಾರಗಳ ಬಗ್ಗೆ ಹಲವು ಅನುಮಾನ, ಕುತೂಹಲಗಳು ಇರುವುದು ಸಹಜವಾಗಿದೆ. ಆದ್ದರಿಂದಲೇ ಪ್ರವಾದಿ ಜನಿಸಿದ ಈ ತಿಂಗಳಲ್ಲಿ ಅವರ ಸಂದೇಶದ ಪ್ರಮುಖ ಭಾಗವಾಗಿರುವ ಮಸೀದಿಯನ್ನು ಸಾರ್ವಜನಿಕರಿಗೆ ತೆರೆದಿಡಬೇಕು ಎಂದು ನಿರ್ಧರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಜಾಮಿಯಾ ಮಸೀದಿ ಕುದ್ರೋಳಿ ಆಡಳಿತ ಮಂಡಳಿ, ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಜಂಟಿಯಾಗಿ ಮಸೀದಿ ದರ್ಶನ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷರಾದ ಜನಾಬ್ ಕೆ.ಎಂ ಆಶ್ರಫ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಂತರ ಮಾತನಾಡಿದ ಜನಾಬ್ ಸಿ.ಎ. ಇಸಾಕ್ ಪುತ್ತೂರು ರವರು ಮಂಗಳೂರು ಕುದ್ರೋಳಿಯಲ್ಲಿರುವ ಜಾಮಿಯಾ ಮಸೀದಿಯನ್ನು ಸೆಪ್ಟೆಂಬರ್ 14ರಂದು ಬೆಳಿಗ್ಗೆ 10.30 ರಿಂದ ಸಂಜೆ 7 ಗಂಟೆಯವರೆಗೆ ಸರ್ವಧರ್ಮಿಯ ಸ್ತ್ರೀ ಪುರುಷರಿಗೆ ನೋಡಲು ತೆರೆದಿಡಲು ನಿರ್ಧರಿಸಿದ್ದೇವೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಧಾಮ ಮಾಣಿಲದ ಮೋಹನ್ದಾಸ ಪರಮಹಂಸ ಸ್ವಾಮೀಜಿ
ನೆರವೇರಿಸಲಿದ್ದಾರೆ.ಕಾರ್ಯಕ್ರಮದ ಗೌರವಾಧ್ಯಕ್ಷತೆಯನ್ನು ಜನಾಬ್ ಹಾಜಿ ಕೆ.ಎಸ್. ಮುಹಮದ್ ಮಸೂದ್ Ex-MLC(ಅಧ್ಯಕ್ಷರು, ಜಾಮಿಯಾ ಮಸೀದಿ, ಕುದ್ರೋಳಿ) ವಹಿಸಲಿದ್ದಾರೆ,ಮುಖ್ಯ ಅತಿಥಿಗಳಾಗಿ ಫಾ. ವಲೇರಿಯನ್ ಡಿ.ಸೋಜ, ಅಜಿತ್ ಕುಮಾರ್ ರೈ ಮಾಲಾಡಿ,ಜೈರಾಜ್ ಹೆಚ್ , ಲೋಕೇಶ್ ಪುತ್ರನ್, ರಾಜೇಶ್ ಉರ್ವ
ಜನಾಬ್ C.A.ಇಸಾಕ್ ಪುತ್ತೂರು,ಜನಾಬ್ ಬಿ.ಎಸ್. ಶರ್ಫುದ್ದೀನ್

ಕ್ಯಾಪ್ಟನ್ ಬೃಜೇಶ್ ಚೌಟ,ಸಂಸದರು. ಶಾಸಕರಾದ ವೇದವ್ಯಾಸ್ ಕಾಮತ್, ಐವನ್ ಡಿ’ಸೋಜ,ಜನಾಬ್ ಮುಫ್ತಿ ಶೇಕ್ ಮುತಹ್ಹರ್ ಹುಸೈನ್ ಖಾಸ್ಮಿ, ಜನಾಬ್ ರಿಯಾಝುಲ್ ಹಕ್ ರಷಾದಿ, ಪದ್ಮರಾಜ್ ಆರ್, ಚೇತನ್ ಬೆಂಗರೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಸೀದಿಗೆ ಆಗಮಿಸಿದವರ ಕುತೂಹಲ ಪ್ರಶ್ನೆ ಮತ್ತು ಜಿಜ್ಞಾಸೆಗಳಿಗೆ ಸೂಕ್ತ ವಿವರಣೆಯನ್ನು ಕೊಡುವ ಏರ್ಪಾಟನ್ನೂ ಮಾಡಿದ್ದೇವೆ. ಮಸೀದಿಯ ಒಳಗೆ ಸ್ತ್ರೀ ಪುರುಷ ಸಹಿತ ಸರ್ವ ಧರ್ಮೀಯರೂ ಬಂದು ಅದರೊಳಗಿನ ಚಟುವಟಿಕೆಗಳನ್ನು ವೀಕ್ಷಿಸಿ ಪಡಕೊಳ್ಳುವ ಪ್ರಶ್ನೆಗಳಿದ್ದರೆ ಕೇಳಿ, ವಿವರಣೆಯನ್ನು ತಿಳಿಸಲಿದ್ದಾರೆಂದು ಇಸಾಕ್ ಪುತ್ತೂರು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜನಾಬ್ ಎಸ್.ಎ. ಖಲೀಲ್, ಜನಾಬ್ ಅಬ್ದುಲ್ ಅಝೀಝ್,ಜನಾಬ್ ಯಾಸೀನ್ ಉಪಸ್ಥಿತರಿದ್ದರು.

