ಮಂಗಳೂರು : ಕದರಿಕಾ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಂಗ ಸಂಸ್ಥೆಯಾದ ಕದ್ರಿ ಕ್ರಿಕೆಟರ್ಸ್ (ರಿ) ಆಯೋಜಿಸುವ 16ನೇ ವರ್ಷದ ಕದ್ರಿ ಸ್ಟಾರ್ ನೈಟ್ ಕಾರ್ಯಕ್ರಮವು ದಿನಾಂಕ 15 ರಂದು ಸೋಮವಾರ ಕದ್ರಿ ಮೊಸರು ಕುಡಿಕೆ ಉತ್ಸವದ ಸಂದರ್ಭದಲ್ಲಿ ಸಂಜೆ 6 ರಿಂದ ಕದ್ರಿ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕದ್ರಿ ಮನೋಹರ್ ಶೆಟ್ಟಿ ಅವರು ತಿಳಿಸಿದ್ದಾರೆ

ಈ ಬಾರಿ ಖ್ಯಾತ ಹಿನ್ನೆಲೆ ಗಾಯಕ ಶ್ರೀ ರಾಜೇಶ್ ಕೃಷ್ಣನ್, ಕನ್ನಡ ಸಿನಿಮಾ ನಟಿ ನಿಮಿಕ ರತ್ನಾಕರ್ ಹೆಸರಾಂತ ಹಿನ್ನೆಲೆ ಗಾಯಕ ಶಶಾಂಕ್ ಶೇಷಗಿರಿ, ಜೀ ಸರಿಗಮಪ ಜೂರಿ ಶ್ರುತಿ ಪ್ರಹ್ಲಾದ್, ಹೆಸರಾಂತ ಹಿನ್ನೆಲೆ ಗಾಯಕ ಅನಿರುದ್ಧ ಶಾಸ್ತ್ರಿ, ಬಹುಭಾಷಾ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಚಿತ್ರ ನಟ ರೂಪೇಶ್ ಶೆಟ್ಟಿ,ಗೋಲ್ಡನ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿರುವ ಗಾಯಕ ಯಶವಂತ್ ಎಂ ಜಿ, ಭಾರತ ನಾಟ್ಯ ಕಲಾವಿದರಾದ ವಿಧುಷಿ ದೀಕ್ಷಾ ಉಡುಪಿ ಹಾಗೂ ರೇಮೊನಾ ಭಾಗವಹಿಸಲಿದ್ದಾರೆ.ಅಲ್ಲದೆ ಇತ್ತೀಚಿಗೆ ತೆರಕಂಡ ಯಶಸ್ವಿ ಕನ್ನಡ ಚಲನಚಿತ್ರ ಸು ಫುಮ್ ಸೊ ಚಿತ್ರದ ನಿರ್ದೇಶಕ ಜೆ.ಪಿ ತೂಮಿನಾಡ್ ಸೇರಿ ಹಲವು ಕಲಾವಿದರು ಭಾಗವಹಿಸಲಿದ್ದಾರೆ.ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸ ಬೇಕಾಗಿದ್ದ ನಟ ಆದಿತ್ಯ ಅವರು ಶ್ರೀಲಂಕಾ ಪ್ರವಾಸದಲ್ಲಿರುವುದರಿಂದ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲವೆಂದು ಸಂಘಟಕರಲ್ಲಿ ವಿನಂತಿಸಿದ್ದಾರೆ.

ಅಲ್ಲದೆ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಶಾಸಕರಾದ ವೇದವ್ಯಾಸ್ ಕಾಮತ್ ,ಡಾ ಭರತ್ ಶೆಟ್ಟಿ, ಕಿಶೋರ್ ಕುಮಾರ್ ಬೊಟ್ಯಾಡಿ,ಮಂಜುನಾಥ್ ಭಂಡಾರಿ, ಅದಾನಿ ಗ್ರೂಪ್ ಅಧ್ಯಕ್ಷರಾದ ಕಿಶೋರ್ ಶೆಟ್ಟಿ, ಉದ್ಯಮಿಗಳಾದ ಡಾ. ಪ್ರಕಾಶ್ ಶೆಟ್ಟಿ ,ಡಾ|ಎ.ಜೆ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಲ್ಲದೆ ಹಲವಾರು ಗಣ್ಯಾತಿ ಗಣ್ಯರು ಭಾಗವಹಿಸಲಿದ್ದು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ ಎಂದು ಮನೋಹರ ಕದ್ರಿ ತಿಳಿಸಿದ್ದಾರೆ.

ಈ ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಘವೇಂದ್ರ ಬರವತ್ತಾಯ, ಸದಸ್ಯರಾದ ಹೇಮಾನಂದ್ ಕೊಡೈಬೈಲ್, ತಾರಾನಾಥ ಶೆಟ್ಟಿ ಕದ್ರಿ,ರವೀಶ್ ರೈ, ಶರಣ್ ಕದ್ರಿ , ಸುಜಿತ್ ಕದ್ರಿ, ಪ್ರತೀಕ್ ಶೆಟ್ಟಿ ಕದ್ರಿ, ಸಂದೀಪ್ ರಾವ್, ಸುನಿಲ್ ಶೆಟ್ಟಿ ಕದ್ರಿ, ಸಚಿನ್ ಕದ್ರಿ, ಶ್ರವಣ್ ಕದ್ರಿ,ಸಹಾನ್ ಕದ್ರಿ ,ಅವಿನಾಶ್ ರೈ, ಶ್ರೀನಾಥ್ ಕದ್ರಿ ಮೊದಲಾದವರು
ಉಪಸ್ಥಿತರಿದ್ದರು.

