ಮಂಗಳೂರು : ಸುವರ್ಣ ಕದಳಿ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಶ್ರೀ ಗೋರಕ್ಷನಾಥ ಮಿನಿ ಸಭಾಂಗಣ ಕದ್ರಿಯಲ್ಲಿ ಅಧ್ಯಕ್ಷ ಸತೀಶ್ ಜೋಗಿ ಮಾಲೆಮಾರ್ ರವರ ಅಧ್ಯಕ್ಷತೆಯಲ್ಲಿ ನೆರವೇರಿತು.ಮುಖ್ಯ ಕಾರ್ಯ ನಿರ್ವಾಹಣ ಅಧಿಕಾರಿ, ಶ್ರೀಮತಿ ವಿಶಾಲಾಕ್ಷಿ ಯವರು 2024-2025 ನೇ ಸಾಲಿನ ಕಾರ್ಯಚಟುವಟಿಕೆಯ ವಿವರವನ್ನು ನೀಡುತ್ತಾ, ಪ್ರಸ್ತುತ 1256 ಆ ವರ್ಗದ ಸದಸ್ಯರಿದ್ದು, 2.5 ಕೋಟಿ ಠೇವಣಿ ಸಂಗ್ರಹಿಸಿದ್ದು, 1.27 ಕೋಟಿ ಸಾಲ ವಿತರಿಸಲಾಗಿದೆ. ಸಂಘದ ದುಡಿಯುವ ಬಂಡವಾಳ ರೂಪಾಯಿ 2,63,75,860 ಇರುವುದಾಗಿ ವರದಿ ಮಂಡಿಸಿದರು. ನಿರ್ದೇಶಕ ಎಸ್ ಸುಧಾಕರ ಜೋಗಿ ಯವರು ಲೆಕ್ಕ ಪತ್ರಗಳ ತಖ್ತೆಯನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು. ಉಪಾಧ್ಯಕ್ಷ ಕೆ.ಜಗಜೀವನ್ ದಾಸ್ ರವರು ಮುಂದಿನ ಆರ್ಥಿಕ ವರ್ಷದ ಬಜೆಟ್ ಮಂಡಿಸಿದರು. ಅಧ್ಯಕ್ಷ ಶ್ರೀ ಸತೀಶ್ ಜೋಗಿ ಮಾಲೆಮಾರ್ ರವರು ಸಂಘವು ಮೊದಲ ಬಾರಿಗೆ ವಾರ್ಷಿಕ ಖರ್ಚು ವೆಚ್ಚದಲ್ಲಿ ಲಾಭ ಗಳಿಸಿದ್ದು, ಮುಂದಿನ ದಿನಗಳಲ್ಲಿ ಸದಸ್ಯ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಬಿಜೈ ಮಾರುಕಟ್ಟೆ ಪ್ರಾಂಗಣದಲ್ಲಿ ಸ್ಥಳಾಂತರಿಸಿದ ಕೇಂದ್ರ ಶಾಖೆಯ ಬಗ್ಗೆ ನೆರವು ನೀಡಿದ ಎಲ್ಲರಿಗೂ ಕ್ರತಜ್ಞತೆ ಸಲ್ಲಿಸಿದರು.

ಸದ್ರಿ ವರ್ಷದ ಅವಧಿಯಲ್ಲಿ ಸಾಲದ ವಸೂಲಾತಿ ಮತ್ತು ಸದಸ್ಯತ್ವ ಹೆಚ್ಚಳ ಹಾಗೂ ಪಾಲು ಬಂಡವಾಳ ಏರಿಕೆಯ ಬಗ್ಗೆ ಹೆಚ್ಚಿನ ಸಾಧನೆ ನಡೆಸುವ ಉದ್ದೇಶ ಇರಿಸಿದ್ದು, ಸದಸ್ಯರ ಹೆಚ್ಚಿನ ಸಹಕಾರದ ಅಗತ್ಯವೆಂದು ವಿನಂತಿಸಿದರು. ನಿರ್ದೇಶಕರಾದ ಸಿ ಎಚ್ ಮೋಹನ್,ಕೆ. ನಾಗೇಶ್, ಗೋಪಿನಾಥ್ ಜೋಗಿ,ದಿನೇಶ್ ಜೋಗಿ,ಪ್ರಕಾಶ್ ಜೋಗಿ, ಶ್ರೀಮತಿ ನಿಶಾ,ಶ್ರೀಮತಿ ಸುನೀತಾ ರವರು ಉಪಸ್ಥಿತರಿದ್ದರು.ನಿರ್ದೇಶಕಿ ಶ್ರೀಮತಿ ಎನ್.ಸುಮತಿ ಯವರ ವಂದನಾರ್ಪಣೆಯ ನಂತರ ಜನ ಗಣ ಮಣ ಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು

